Submission 2490

ಸೋಜಿಗ

Submitted By: Dr Rajkumar S Patil

----------------------------------

ಮನದಿ ತುಂಬಿಹ ಹಲ ಕೆಲವು ಮೋಹಗಳ ಹಿಡಿದಿಟ್ಟು ಹೊರಸೂಸುವ ಮುಗುಳ್ನಗೆಯ ಮಾಯೆ _ಸೋಜಿಗ ಧುತ್ತೆಂದು ಅಪ್ಪಳಿಸುವ ಸಾಗರದಲೆಗಳು ಮರಳಿ ಮಾಯವಾಗುವ ಮಾಯೆ _ಸೋಜಿಗ ಬಿಸಿಲಿನರ್ಭಟಕೆ ಬೆಂದೆಳೆಯುವ ಮನ ಧೋ! ಎಂದು ಸುರಿವ ಮಳೆಗೆ ಮಲ್ಲಿಗೆಯಂತೆ ಅರಳುವದು _ಸೋಜಿಗ ಗಿಡ-ಮರಗಳಲಿ ಹೂವಿಂದ ಆರಂಭವಾಗುವ ಮೈತ್ರಿ ಹಣ್ಣಾಗುವವರೆಗೂ ಹಿಡಿದಿಡುವ ಕಾಯಕ _ಸೋಜಿಗ ಹನಿ ಹನಿ ಮಳೆಯಾಗಿ ಸುರಿವ ನೀರನು ಭೂರಮೆ ಬಿಗಿದಪ್ಪುವ ಪರಿ _ಸೋಜಿಗ ಭೀಕರ ಕಣ್ಣುಗಳ, ಕಠೋರ ಹೃದಯದಲಿ ಕಾವ್ಯ ಉಕ್ಕುವ ಸೊಬಗು _ಸೋಜಿಗ

----------------------------------

Reg ID: HF25-5343

Please Note - You can vote only Once. If you have already voted - the voting will be disabled automatically by the system.

479
Votes
2,330
Views
9 Months
Since posted

VOTING Closed on Nov 30, 2025!

Scroll to Top