Submission 2535

ಕೃತಕ ಬುದ್ಧಿಮತ್ತೆ

Submitted By: Dr.Raghavendra V Madalli

----------------------------------

ಯಂತ್ರದ ಹೃದಯದಲ್ಲಿ ಬುದ್ಧಿ ಬೆಳಗಿದೆ, ಮಾನವನ ಕನಸಿಗೆ ಪಂಖ ಕಟ್ಟಿ ಬಂತಿದೆ. ಕೇಳಿದರೆ ಉತ್ತರವು ಕ್ಷಣದಲ್ಲೇ ಸಿಗುತ್ತದೆ, ಅಪಾರ ಜ್ಞಾನಧಾರೆ ಮನದೊಳಗೆ ಹರಿಯುತ್ತದೆ. ಓದುಗನಿಗೆ ಪಾಠ ಹೇಳಿ ಗುರುವಾದಂತಿದೆ, ಕಲಿಕೆಯ ಪಯಣದಲ್ಲಿ ನೆರವು ನೀಡುತ್ತದೆ. ವೈದ್ಯನ ಕೈ ಹಿಡಿದು ರೋಗ ಗುರುತಿಸುತ್ತದೆ, ಜೀವ ಉಳಿಸುವ ದಾರಿಯ ಬೆಳಕು ತರುತ್ತದೆ. ಕೃಷಿಕನ ಹೊಲದಲ್ಲಿ ಹವಾಮಾನ ಹೇಳುತ್ತದೆ, ಬೆಳೆ ಬೆಳಸುವ ಜ್ಞಾನ ಬೀಜ ಬಿತ್ತುತ್ತದೆ. ರೋಬೋಟ್ ನಡೆದುಕೊಂಡು ನೃತ್ಯವಾಡುವಂತೆ, ಭವಿಷ್ಯದ ಕನಸುಗಳು ನಿಜವಾಗುವಂತೆ. ಭಾಷೆಗಳನ್ನು ಕಲಿಸಿ ಸೇತುವೆ ಕಟ್ಟುತ್ತದೆ, ಜನಮನಗಳ ನಡುವೆ ಸ್ನೇಹ ಹರಡುತ್ತದೆ. ಚಿತ್ರ ಕವಿತೆ ಹಾಡಿಗೆ ಸ್ಪೂರ್ತಿ ನೀಡುತ್ತದೆ, ಸೃಜನಶೀಲತೆಯ ದಾರಿ ಬೆಳಗುತ್ತದೆ. ಆದರೂ ನಾವೆಲ್ಲ ಜಾಣ್ಮೆಯಿಂದ ಬಳಕೆ ಮಾಡಬೇಕು, ಮಾನವ ಮೌಲ್ಯವನ್ನು ಸದಾ ಕಾಪಾಡಬೇಕು. ಕೃತಕ ಬುದ್ಧಿಮತ್ತೆ ಮಿತ್ರನು ಅಮೂಲ್ಯ, ಸದುಪಯೋಗ ಮಾಡಿದರೆ ಭವಿಷ್ಯ ದೀಪಮಾಲ್ಯ.

----------------------------------

Reg ID: HF25-5362

Please Note - You can vote only Once. If you have already voted - the voting will be disabled automatically by the system.

7
Votes
181
Views
11 Months
Since posted

VOTING Closed on Nov 30, 2025!

Scroll to Top